ಸಮರೇಶ್ ಜಂಗ್ (1970 ರ ಮೇ 5 ರಂದು ಜನಿಸಿದರು.) ಅವರು ಭಾರತೀಯ ಕ್ರೀಡಾ ಶೂಟರ್(ಗುರಿಕಾರ)ಆಗಿದ್ದಾರೆ. ಇವರು ಏರ್ ಪಿಸ್ತೂಲ್ (ಗಾಳಿ ರೈಫಲ್) ಬಳಕೆಯಲ್ಲಿ ಪ್ರವೀಣರಾಗಿದ್ದಾರೆ. ಮ್ಯಾಂಚೆಸ್ಟರ್ ನಲ್ಲಿ ನಡೆದ 2002 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಫ್ರೀ ಪಿಸ್ತೂಲ್ (ಜೋಡಿಗಳ) ಪಂದ್ಯದಲ್ಲಿ 25ಮಿ ಸ್ಟಾಂಡರ್ಡ್ ಪಿಸ್ತೂಲ್ (ಜೋಡಿಗಳ) ಓಪನ್ ಪಂದ್ಯದಲ್ಲಿ ಜಸ್ ಪಾಲ್ ರಾಣಾ ಜೊತೆಗೂಡಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಬೀಜಿಂಗ್ ನಲ್ಲಿ ನಡೆದ 2008 ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ 10ಮಿ ಏರ್ ಪಿಸ್ತೂಲ್ ಮತ್ತು 50ಮಿ ಪಿಸ್ತೂಲ್ ಪಂದ್ಯಗಳಲ್ಲಿ ಸ್ಪರ್ಧಿಸಿದರು, ಆದರೆ ಎರಡೂ ಪಂದ್ಯಗಳಲ್ಲಿ ಫೈನಲ್ಸ್ ತಲುಪಲು ವಿಫಲರಾದರು. 2002 ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇವರು ನಲ್ಲಿ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ಕಾರ್ಯನಿರ್ವಹಿಸುತ್ತಿದ್ದು, ನವ ದೆಹಲಿಯಲ್ಲಿ ವಾಸವಾಗಿದ್ದಾರೆ. 2010 ರ ಅಕ್ಟೋಬರ್ 3 ರಂದು ಇವರು ದೆಹಲಿಯ 2010 ರ ಕಾಮನ್ ವೆಲ್ತ್ ಕ್ರೀಡಾಕೂಟಗಳಿಗಾಗಿ ಮೈದಾನದಲ್ಲಿ ನಡೆಯುತ್ತಿದ್ದ ಉದ್ಘಾಟನಾ ಸಮಾರಂಭ ದಲ್ಲಿ ಕ್ವೀನ್ಸ್ ಬ್ಯಾಟನ್ ರಿಲೇಯ ಧ್ವಜವಾಹಕರಾಗಿದ್ದರು. == 2006 ರ ಕಾಮನ್‌ ವೆಲ್ತ್‌ ಕ್ರೀಡಾಕೂಟ == 2006 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಇವರು ಎಂಟು ಪದಕಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮೊದಲಾರ್ಧದಲ್ಲಿ ಬೆಳ್ಳಿಯನ್ನು ಗೆದ್ದುಕೊಂಡರು. ಅಂತಿಮವಾಗಿ ಅವರು ಐದು ಚಿನ್ನದ ಪದಕ, ಒಂದು ಬೆಳ್ಳಿಯ ಪದಕ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡರು. 25ಮಿ ನ ಸೆಂಟರ್ ಫೈರ್ ಪಿಸ್ತೂಲ್ ವೈಯಕ್ತಿಕ ಪಂದ್ಯದಲ್ಲಿ ಕೇವಲ ಕಂಚಿನ ಪದಕ ಗಳಿಸಿದ ಅವರಿಗೆ ಅನಂತರದ ಸ್ಪರ್ಧೆಗಳಲ್ಲಿ ಒಂದು ಬೆಳ್ಳಿ ಮತ್ತು ಐದು ಚಿನ್ನದ ಪದಕಗಳನ್ನು ಗಳಿಸಿದ ನಂತರ ತೃಪ್ತಿಯಾಯಿತು. ಸ್ಟಾಂಡರ್ಡ್ ಫೈರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಅವರ ಬಂದೂಕು,ಗನ್ನು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರಿಂದ ಆ ಪಂದ್ಯದಲ್ಲಿ ಪದಕಕ್ಕಾಗಿ ಸ್ಪರ್ಧಿಸದೆ ಹೊರನಡೆಬೇಕಾಯಿತು. ಇವರಿಗೆ "18ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾಪಟು"ವಿಗೆ ನೀಡುವ ಡೇವಿಡ್ ಡಿಕ್ಸನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಿಗೆ [೧] ಕ್ರೀಡಾಕೂಟದಲ್ಲಿದ್ದ ಸ್ವಯಂ ಸೇವಕರು "ಗೋಲ್ಡ್ ಫಿಂಗರ್ " ಜೊತೆ ಇವರನ್ನು ಹೋಲಿಕೆ ಮಾಡಿದರು. == ಆರಂಭಿಕ ಜೀವನ == ಸಮರೇಶ್ ಜಂಗ್, 1970 ರ ಮೇ 5 ರಂದು ಹರಿಪುರ್ ಖಾಲ್ ನಲ್ಲಿ ಜನಿಸಿದರು. ಇದು ಗೌಜು-ಗಲಾಟೆಗಳಿಲ್ಲದ ಶಾಂತ ಗ್ರಾಮವಾಗಿದ್ದು, ಹಿಮಾಚಲ ಪ್ರದೇಶದ ಶಿವಾಲಿಕ್ ಪರ್ವತದ ಕೆಳಭಾಗದ,ಫೂಟ್ ಹಿಲ್ಸ್ ನಲ್ಲಿರುವ ಸಿರ್ಮೌರ್ ಜಿಲ್ಲೆಯಿಂದ 175 ಕಿಲೋ ಮೀಟರ್ ದೂರದಲ್ಲಿದೆ. ಇವರು ಭಾರತದ ರಕ್ಷಣಾ ಪಡೆಯ ನಿವೃತ್ತ ಕರ್ನಲ್ ರವರ ಪುತ್ರರಾಗಿದ್ದು, ಜಂಗ್ ಅವರ ಅಜ್ಜ ಶೇರ್ ಜಂಗ್ ರವರಿಂದ ಶೂಟಿಂಗ್ ಕಲೆ ಕರಗತ ಮಾಡಿಕೊಂಡರು. ಇವರು ಶೂಟರ್ ಆಗಿದ್ದರಲ್ಲದೇ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಜಂಗ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ದೆಹಲಿಯ ಮಾಡ್ರನ್ ಶಾಲೆಯಲ್ಲಿ ಮುಗಿಸಿದರು. ತರುವಾಯ, ಹೈದ್ರಾಬಾದ್ ನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಅವರು ಡಿಗ್ರಿಪದವಿ ಪಡೆದರು. ಇವರು ಅತ್ಯುತ್ತಮ ಚೆಸ್ ಆಟಗಾರರು ಕೂಡ ಹೌದು ಎಂಬುದು ಕೇವಲ ಕೆಲವು ಜನರಿಗೆ ಮಾತ್ರ ತಿಳಿದಿದೆ. == ಪ್ರಶಸ್ತಿಗಳು ಮತ್ತು ಪದಕಗಳು == 2002 ಅರ್ಜುನ ಪ್ರಶಸ್ತಿ ಕಾಮನ್ ವೆಲ್ತ್ ಕ್ರೀಡಾಕೂಟ: 2 ಚಿನ್ನದ ಪದಕಗಳು (ಪುರುಷರ ಫ್ರೀ ಪಿಸ್ತೂಲ್ (ಜೋಡಿ) ಮತ್ತು ಓಪನ್ ಸ್ಟ್ಯಾಂಡರ್ಡ್ ಪಿಸ್ತೂಲ್ (ಜೋಡಿ), ಎರಡನ್ನು ಜಸ್ ಪಾಲ್ ರಾಣಾರವರೊಂದಿಗೆ ಗಳಿಸಿದ್ದಾರೆ) ಹಾಗು 3 ಬೆಳ್ಳಿಯ ಪದಕಗಳು (ಏರ್ ಪಿಸ್ತೂಲ್ ವೈಯಕ್ತಿಕ ಪಂದ್ಯ, ಫ್ರೀ ಪಿಸ್ತೂಲ್ ವೈಯಕ್ತಿಕ ಪಂದ್ಯ, ಮತ್ತು ಫ್ರೀ ಪಿಸ್ತೂಲ್ (ಜೋಡಿ), ಕೊನೆಯದನ್ನು ರಾಣಾರವರೊಂದಿಗೆ ಗಳಿಸಿದ್ದಾರೆ) 2004 ಕ್ರೀಡಾಕೂಟ: 1 ಬೆಳ್ಳಿಯ ಪದಕ (25ಮಿ ಸ್ಟ್ಯಾಂಡರ್ಡ್ ಪಿಸ್ತೂಲ್) 2005 ಐದನೆ ಕಾಮನ್ ವೆಲ್ತ್ ಕ್ರೀಡಾಕೂಟ ಶೂಟಿಂಗ್ ಚಾಂಪಿಯನ್ಷಿಪ್ : 2 ಚಿನ್ನದ ಪದಕಗಳು, 2 ಬೆಳ್ಳಿಯ ಪದಕಗಳು, ಮತ್ತು 1 ಕಂಚಿನ ಪದಕ ಭಾರತದ ರಾಷ್ಟ್ರೀಯ ಕ್ರೀಡಾಕೂಟಗಳು: 1 ಚಿನ್ನದ ಪದಕ (10ಮಿ ಏರ್ ಪಿಸ್ತೂಲ್) 2006 ಕಾಮನ್ ವೆಲ್ತ್ ಕ್ರೀಡಾಕೂಟ: ಡೇವಿಡ್ ಡಿಕ್ಸನ್ ಪ್ರಶಸ್ತಿ (ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾಪಟು); 5 ಚಿನ್ನದ ಪದಕಗಳು (ಪುರುಷರ 50ಮಿ ಪಿಸ್ತೂಲ್, ಪುರುಷರ 10ಮಿ ಏರ್ ಪಿಸ್ತೂಲ್, ಪುರುಷರ 25ಮಿ ಸೆಂಟರ್ ಫೈರ್ ಪಿಸ್ತೂಲ್ (ಜೋಡಿ) (ರಾಣಾರವರೊಂದಿಗೆ), ಪುರುಷರ 10ಮಿ ಏರ್ ಪಿಸ್ತೂಲ್ (ಜೋಡಿ) (ವಿವೇಕ್ ಸಿಂಗ್ ರವರೊಂದಿಗೆ, ಮತ್ತು ಪುರುಷರ 25ಮಿ ಸ್ಟ್ಯಾಂಡರ್ಡ್ ಪಿಸ್ತೂಲ್ (ಜೋಡಿ) (ರೋನಕ್ ಪಂಡಿತ್ ರವರೊಂದಿಗೆ), 1 ಬೆಳ್ಳಿಯ ಪದಕ (ಪುರುಷರ 50ಮಿ ಪಿಸ್ತೂಲ್ (ಜೋಡಿ) ಸಿಂಗ್ ರವರೊಂದಿಗೆ), ಹಾಗು 1 ಕಂಚಿನ ಪದಕ (ಪುರುಷರ 25ಮಿ ಸೆಂಟರ್ ಫೈರ್ ಪಿಸ್ತೂಲ್) == ಉಲ್ಲೇಖಗಳು == === ಸಾಮಾನ್ಯ ಆಕರಗಳು === ಸಮರೇಶ್ ಜಂಗ್'ಸ್ ಫ್ರೊಫೈಲ್ , ಇಮೇಜಸ್ ಅಂಡ್ ನ್ಯೂಸ್ 2010-08-17 ವೇಬ್ಯಾಕ್ ಮೆಷಿನ್ ನಲ್ಲಿ. ನ್ಯೂಸ್ ಐಟಂ ಅಬೌಟ್ ಜಂಗ್ಸ್ ಪರ್ಫಾರ್ಮೆನ್ಸ್ ಅಟ್ 2006 ಕಾಮನ್ ವೆಲ್ತ್ ಗೇಮ್ಸ್ ಸಮರೇಶ್ ಜಂಗ್ ಆನ್ ಮಿನಿಸ್ಟ್ರಿ ಆಫ್ ಯೂತ್ ಅಫೇರ್ಸ್ ಅಂಡ್ ಸ್ಪೋರ್ಟ್ಸ್ 2007-09-27 ವೇಬ್ಯಾಕ್ ಮೆಷಿನ್ ನಲ್ಲಿ., ಗವರ್ನಮೆಂಟ್ ಆಫ್ ಇಂಡಿಯಾವೆಬ್ ಸೈಟ್ 5ತ್ ಡಿಸೆಂಬರ್ 2005 ನ್ಯೂಸ್ ಸ್ಟೋರಿ 2007-08-05 ವೇಬ್ಯಾಕ್ ಮೆಷಿನ್ ನಲ್ಲಿ. ಇನ್ ದಿ ಹಿಂದು ಅಬೌಟ್ ಸಮರೇಶ್ ಜಂಗ್ಸ್ ಡಿಫೆನ್ಸ್ ಇನ್ 2005 ನ್ಯಾಷನಲ್ ಗೇಮ್ಸ್. 2004 ಗೇಮ್ಸ್ ರಿಪೋರ್ಟ್ ರಿಸಲ್ಟ್ ಆಫ್ ದಿ 5ತ್ ಕಾಮನ್ ವೆಲ್ತ್ ಗೇಮ್ಸ್ ಶೂಟಿಂಗ್ ಚಾಂಪಿಯನ್ಷಿಪ್ 2006-04-27 ವೇಬ್ಯಾಕ್ ಮೆಷಿನ್ ನಲ್ಲಿ., ಮೆಲ್ಬರ್ನ್ 2006 ಕಾಮನ್‌ವೆಲ್ತ್‌ ಗೇಮ್ಸ್ === ಉಲ್ಲೇಖಗಳು ===